ಸೋಮವಾರ, ನವೆಂಬರ್ 16, 2009

ಪಟಾಕಿಯ ಪಕ್ಷಿಪುರಾಣ

ಹಾಯ್...ದೀಪಾವಳಿ ಮುಗುದರೂ ಎಂತ ಪಟಾಕಿಯ ಪತ್ತೆ ಇಲ್ಲೇ..? ಠುಸ್ಸ ಆತೋ ಹೇಂಗೆ ಹೇಳಿ ಗ್ರೆಸಿದಿರೋ? ನಮ್ಮದು ದುಮದುಮ್ ಹೇಳುವ ಪಟಾಕಿ ಅಲ್ಲ ಇದಾ. ಮಾಲೆದು ಮೊದಲೇ ಅಲ್ಲ .. ಹಾಂಗೆ ತಣ್ಣನ್ಗೆ ಅಪ್ಪದೂ ಅಲ್ಲ.. ಚೂರು ಚೂರೇ ವರ್ಷ ಇಡೀ ಹೊತ್ತಿಸುವ ಕಡ್ಡಿ ಪಟಾಕಿ, ಸುರುಸುರು ಬತ್ತಿ...!(ಬತ್ತಿ ಮಡುಗುದು ಹೇಳಿ ಅಲ್ಲ..ಹಾಂ..) ದುರುಸು ಬಾಣ ಹೇಳಿರೂ ಅಕ್ಕು...( ಅಂಡೆ ದುರುಸು ಹೇಳಡಿ ಮತ್ತೆ...!)
ಈ ಪಟಾಕಿಯ ಡಬ್ಬಿ ಯಾವಾಗ ಒಪನ್ ಅಕ್ಕು ಹೇಳಿ ಯಾರೆಲ್ಲ ಕಾಯ್ತಾ ಇದ್ದವೋ ಗೊಂತಿಲ್ಲೆ..ಡಬ್ಬಿಲಿ ತರತರದ ಪಟಾಕಿ ಇದ್ದಾದರೂ ಯಾವುದು ಲೊಟ್ಟೆಪಟಾಕಿ ಅಲ್ಲ! ಈ ಪಟ್ಟಾಂಗ ಹೇಳುವ ವಿಷಯವೇ ಹಾಂಗೆ,ಹೇಳುಲೆ ಕೂತರೆ ಹೊತ್ತು ಹೋಪದೆ ಗೊಂತಾಗ ಇದ..ಆನು ಪಟ್ಟಾಂಗಕ್ಕೆ ಬಪ್ಪಲೆ ತುಂಬಾ ತಡ ಆತು ಹೇಳಿ ಕಾಣ್ತು.!
ಇರಲಿ, ಇದೆಂತಾ ಪಕ್ಷಿಪುರಾಣ ,ಈ ಜನ ಮಕ್ಕಳ ಹಾಂಗೆ ಹಕ್ಕಿ ಕತೆ ಹೇಳುಲೆ ಹೊರಟಿದ ಹೇಳಡಿ. ನಮ್ಮ ಊರಿನ ಹಳ್ಳಿಲಾದ್ರೊ ಹಕ್ಕಿ ಬಪ್ಪದು,ಗೂಡು ಕಟ್ಟುದು ಎಲ್ಲವೂ ಕಾಮನ್ನು.ಹೆಚ್ಚು ಹೇಳಿದ್ರೆ ಗದ್ದೆ ಕೊಡಿಲಿ ಹಾರುತ್ತು ಹೇಳುಗಷ್ಟೆ ಮಕ್ಕೊಗೆ ತೋರುಸಿ..ಆದ್ರೆ ಪೇಟೆ ವಿಷ್ಯಕ್ಕೆ ಬಂದ್ರೆ ಹಾಂಗಲ್ಲ ಇದ,ಇಲ್ಲಿ ಎಲ್ಲವೂ ಗಮ್ಮತ್ತೆ..ಇಲ್ಲಿ ಕೆಲವಕ್ಕೆ ಕಾಗೆ ಗುಬ್ಬಕ್ಕನ ಬಿಟ್ರೆ ಬೇರೆ ಹಕ್ಕಿಗಳೆ ಗೊಂತಿದ್ದೊ ಇಲ್ಯೊ!.( ಅದೂ ಈಗ ಮೊಬೈಲ್ಲು ತವರಿನ ದೆಸೆಂದ ಲಗಾಡಿ ! ಹಾಂಗಾಗಿ ಚಿತ್ರಪತಂಗಳಲ್ಲೇ ಮಕ್ಕೊಗೆ ಪರಿಚಯ ಮಾಡೆಕ್ಕಷ್ಟೇ .. ) ಈಗ ಆದ್ರೆ ಸಾಮಾನ್ಯವಾಗಿ ಇದರ ಸುದ್ದಿಗಿಲ್ಲದ್ದ ಈ ಪಟಾಕಿಗೆ ಹಕ್ಕಿಗಳ ಬಗ್ಗೆ ಹೇಂಗೆ ಆಸಕ್ತಿ ಬಂತೊ ಗೊಂತಿಲ್ಲೆ.
ಮಾರಾಯರೆ..!ಅದು ಕಾಕತಾಳಿಯವೆ ಸರಿ..! ಅದರ ಕತೆ ಹೇಳ್ತೆ ಕೇಳಿ..ಮಳೆ ಜೋರಾಗಿಪ್ಪ ಸಮಯ..ಕೊಡಗು ಹೇಳಿದ್ರೆ ರಜ ಚಳಿ ಜಾಗೆ ಇದ..ಇಂಥ ಸಮಯಲ್ಲಿ ಎಂಥಹ ಪುರುಷೋತ್ತಮಂಗಕ್ಕುದೇ ಮನೆಂದ ಹೆರಡುಲೆ ಸೋಂಬೇರಿತನ ಇಪ್ಪದೇ.ಆದರೆ ಎನ್ನ ಪುಣ್ಯಕ್ಕೆ ಈ ಅಪವಾದಂದ ಪಾರಪ್ಪಲೆ ಎನ್ನ ಎಕ್ಸಾಂ ಮುಗುದು ರಜೆ ಸಿಕ್ಕಿತ್ತು..ಹಿಂಗೆ ಒಂದು ದಿನ ಮನೆಲಿ ಕುತಿಪ್ಪಾಗ ಮನೆಯ ಮುಂದಾಣ ಕಿಟಕಿಗೆ ಎರಡು ಹಕ್ಕಿಗೋ ಬಂದು ಕೊಕ್ಕಿಲಿ ಕುಟ್ಟುತ್ತ ಇತ್ತಿದ್ದವು..ಆನು ಸುಮ್ಮನೆ ನೊಡ್ತಾ ಇತ್ತಿದ್ದೆ..ಅಷ್ಟರಲ್ಲಿ ಅಪ್ಪನ ಗಮನಕ್ಕೆ ಬಂತೊ ಎನೊ..! ಎರಡು ದಿನಂದ ಆ ಹಕ್ಕಿಗೊ ಬತ್ತಾ ಇದ್ದ ಸುದ್ದಿ ಹೇಳಿದವು.ಅ ಹಕ್ಕಿಗೊ ನೊಡ್ಲೆ ಸಣ್ಣ ಅದ್ರು ಭಾರೀ ಚುರುಕು..ಉದ್ದ ಕೊಕ್ಕು ಆಗಿ ಕಡು ನೀಲಿ,ಕಪ್ಪು,ಬಿಳಿ ಬಣ್ಣ ಮಿಶ್ರ ಆಗಿ ನೊಡ್ಲೆ ಭಾರಿ ಚೆಂದ ಇತ್ತು.
ಅದಾದ ಮತ್ತೆ ಎರಡು ದಿನ ಬೆಳಗ್ಗೆ ಹಾಂಗೆ ಬಂದು ಹಕ್ಕಿಗೊ ಕಿಟಕಿಗೆ ಬಡಿತ್ತಾ ಇತ್ತಿದ್ದವು.ನಿಜವಾದ ಸಂಗತಿ ಎಂತ ಹೇಳಿದ್ರೆ ಅದರ ಮೋರೆ ಕನ್ನಡಿಲಿ ಕಾಣ್ತಾ ಇತ್ತು.ಅದು ಬೇರೆ ಹಕ್ಕಿ ಆದಿಕ್ಕು ಹೇಳಿ ಗ್ರೇಶಿ ಆಗಾಗ ಕಿಟಕಿಗೆ ಬಡಿತ್ತಾ ಇತ್ತಷ್ಟೆ.!ಆದರೆ ಈ ಹಕ್ಕಿಗೊ ಗೂಡು ಕಟ್ಟುವ ಜಾಗೆ ತಲಾಶಿಂಗೆ ದಿನಾ ಬತ್ತಾ ಇಪ್ಪದು ಹೇಳಿ ಗೊಂತದ್ದು ಅಪ್ಪ ಹೇಳಿದ ಮತ್ತೆಯೇ...!
ಮನೆಲಿ ಹಳ್ಳಿಯ ಹಾಂಗೆ ಅಂಗಳ,ಮೂಲೆ ಹೇಳುವ ಒಪ್ಪದ ಜಾಗೆ ಇಲ್ಲೆ.ಅದ್ರು ಆ ಹಕ್ಕಿಗೊಕ್ಕೆ ನಮ್ಮ ಬಿಎಸೆನ್ನೆಲ್ ತಂತಿ ಇಷ್ಟ ಆದಿಕ್ಕು..ನೋಡ್ತಾ ಇದ್ದ ಹಾಂಗೆ ಬರೀ ಒಂದು ವಾರಲ್ಲಿ ಅದರ ಗೂಡು ರೆಡಿ ಆತು ಮಾರಾಯರೆ..!ನಾವು ಮನೆ ಕಟ್ಟೆಕ್ಕಾದ್ರೆ ಎಷ್ಟೆಲ್ಲ ಒದ್ದಾಡೆಕ್ಕು..ಆದ್ರೆ ಅವಕ್ಕೆ ಜಾಗೆ ಲಿಮಿಟ್ಟೆ ಇಲ್ಲೆ ಇದ..ಅದು ಗೂಡು ಕಟ್ಟಿದ ಸೊಗಸು ನೋಡಿದ್ರೆ ನಮ್ಮ ಇಂಜಿನ್ನಿಯರುಗೊಕ್ಕೆ ಹೊಸ ಐಡಿಯ ಬಂದ್ರು ಬಕ್ಕು.!
ದಿನಾಗಳು ಒಂದೊಂದೆ ತೆಂಗಿನ ನಾರು.ಹುಲ್ಲು,ಸಿಪ್ಪೆ,ಚೋಲಿ ತಂದು ವಯರಿಂಗೆ ಸಿಕ್ಕಿಸಿ ಬಟ್ಟೆ ಹೊಲಿದ ಹಾಂಗೆ ಹೊಲಿಗಿದಾ.,ಅದರ ಗೂಡು ಎಷ್ಟು ಚೆಂದ ಇತ್ತು ಹೇಳಿದ್ರೆ ಸೇಮು ನಮ್ಮ ಜಾತ್ರೆಯ ದಂಬರತೊಟ್ಲಿನ ಹಾಂಗೆ..ಆದರೆ ಯಾವ ಆಧಾರ ಇಲ್ಲದ್ದೆ ಅದು ಗೂಡು ಕಟ್ಟಿದ್ದು ವಿಚಿತ್ರವೆ..ಇದರ ಕಟ್ಟಾಣಲ್ಲಿ ಎರಡು ಹಕ್ಕಿಗಳದ್ದು ಅಲ್ಟರ್ನೇಟ್ ವರ್ಕು..ಅದು ಹೇಂಗೆ ಹೇಳಿ ಎನಗೆ ಇನ್ನು ಅರ್ಥ ಆಯ್ದಿಲ್ಲೆ ಇದ..
ಅದರ ಗಟ್ಟಿತನಕ್ಕೆ ಗೂಡು ಭಾರ ಆತೊ ಎನೊ! ತಂತಿಯಿಂದ ಬೀಳುವ ಹಾಂಗೆ ಆಗಿತ್ತದು. ಅದು ಎನ್ನ ಗಮನಕ್ಕು ಬಂದಿತ್ತಿಲ್ಲೆ.ಒಂದು ದಿನ ಆನು ಟೌನಿಂಗೆ ಹೋಗಿ ಬಪ್ಪಾಗ ಅಪ್ಪ ತಂತಿ ಎಳದು ಕಟ್ಟುತ್ತಾ ಇತ್ತಿದ್ದವು.ಆನು ಕೇಳುಲೆ ಹೋಗದ್ರು ಎನ್ನ ಕರದು ಟೇಪು,ಕತ್ತರಿ ತಪ್ಪಲೆ ಹೇಳಿದವು..ಆಗಲೇ ಗೊಂತಾದ್ದು ಬೀಳುಲಾದ ಹಕ್ಕಿ ಗೂಡಿನ ಎಳದು ಕಟ್ಲೆ ಹೇಳಿ..!.ಅದಕ್ಕೆ ಕಾರಣವು ಇತ್ತು. ನಮ್ಮ ರಾಜ್‌ಕುಮಾರ್ ಸಿನಿಮಾಗಳಲ್ಲಿ ಬಪ್ಪ ವಜ್ರಮುನಿಯ ಹಾಂಗೆ ಇಲ್ಲಿ ಈ ಪುಟ್ಟ ಹಕ್ಕಿಗೊಕ್ಕುದೆ ವಿಲನ್ ಕಾಟ ಇತ್ತು.ನೆಗೆ ಮಾಡಡಿ..!ಅದು ಪಕ್ಕದ ಮನೆಯ ಪುಚ್ಚೆ ಅಷ್ಟೆ!.ಇದು ಪ್ರತಿದಿನ ಗೂಡಿಂಗೆ ಹಾರುದರ ನೋಡಿ ಅಪ್ಪ ಅದರ ಅಟ್ಟುಗು. ಇದರ ಮದ್ಯೆ ವಯರು ಎಳದು ಕಟ್ಟುವ ಕೆಲಸಲ್ಲಿ ಅದು ಕಡುದು ಒಂದು ದಿನ ಪೋನ್ ವರ್ಕೇ ಆಗ ಇದ..!ಕಾರಣ ಗೊಂತಾದ್ದು ಮತ್ತೇಯೆ!. ಪುನ: ಟೇಪು,ಕತ್ರಿ ಕೆಲಸ ಮಾಡಿ ಗೂಡಿಂಗೂ ಜಾಗ ಮಾಡಿ ಆತು.
ಅದಾದ ಮತ್ತೆ ಸರಿ ಒಂದು ತಿಂಗಳಿಲಿ ಹಕ್ಕಿ ಮರಿ ಹಾಕಿ ಗೂಡಿನ ತುಂಬಾ ಅದರ ಬ್ಯಾಂಡ್ ಶುರುವಾದ್ದು ನೋಡ್ಲೆ ಒಂದು ಖುಷಿ.ಪಕ್ಕದ ಮನೆ ಪುಚ್ಚೆಗೂ ಆನು ಬಿಡೆ ಹೇಳುವ ಹಟ..ಅದು ಗೂಡಿನ ಹತ್ರ ಬಂದ್ರೆ ಈ ಹಕ್ಕಿಗೊ ನಾನಾ ಟೊನಿಲಿ ಕಿರುಚುಗು..ಗೂಡು ಮೇಲೆ ಕಟ್ಟಿದ್ದ ಕಾರಣ ಪುಚ್ಚೆಗೂ ನರಿ ದ್ರಾಕ್ಷಿ ಕತೆ ಆತೆನೊ?
ಇಷ್ಟರಲ್ಲಿ ಪಟಾಕಿಗೂ ಕಾಲೇಜ್ ಶುರುವಾತಾದರೂ ದಿನಾಗಲೂದೆ ಗೂಡಿನ ಕಡೆ ಗಮನ ಕೊಡುದು ಅಭ್ಯಾಸ ಆಗಿತ್ತು..ಹಕ್ಕಿ ದಿನಾಲು ಎಂತಾದ್ರು ತಿಂಬ ಐಟಂ ತಕ್ಕು ಅದರ ಮರಿಗೆ ಹೇಳಿ..ಅದರ ನೊಡ್ತಾ ಇಪ್ಪಗ ಅದು ರಜ್ಜ ದಿನಲ್ಲಿ ಗೂಡು ಬಿಡುಗು ಹೇಳಿ ಅಪ್ಪ ಹೇಳಿದರು ಹಾಂಗೆಂತ ಅನ್ಸಿದ್ದಿಲ್ಲೆ..ಜೋರು ಮಳೆ,ಪುಚ್ಚೆಯ ಕಾಟದ ಮದ್ಯೆಯು ಅದು ಗೂಡು ಬಿಡದ್ದದು ಆಶ್ಚರ್ಯವೇ..!ಅದರೊಟ್ಟಿಂಗೆ ಅದು ಅದ್ರ ಗೂಡು ಒಪ್ಪ ಮಾಡುವ ಕೆಲಸ ಶುರು ಮಾಡಿತ್ತು..
ಇದೆಲ್ಲಾ ಆಗಿ ಸುಮಾರು ಎರಡು ತಿಂಗಳು ಅಂಥ ವಿಶೇಷ ಏನೂ ಆಗದ್ರುದೇ ಮತ್ತೆ ಅದರ ದುರಾದೃಷ್ಟ ಹೇಳೆಕ್ಕು.ಗುಬ್ಬಚ್ಚಿಗಳ ಟ್ರೂಪೊಂದು ಅದರ ಗೂಡಿಂಗೆ ಕಾಟ ಕೊಡ್ಲೆ ಶುರು ಮಾಡಿತ್ತು.ಒಂದು ದಿನ ಬೆಳಗ್ಗೆ ಅಂತು ಈ ಹಕ್ಕಿಗಳದ್ದು ಜೋರಾಗಿ ಗೂಡು ಕಿತ್ತು ನೇತಾಡ್ತಾ ಇತ್ತು..ಆದರೂ ಅದರ ಮರಿಗೊಕ್ಕೆ ತೊಂದ್ರೆ ಆಗದ್ದ ಹಾಂಗೆ ಗೂಡಿಲ್ಲಿದ್ದ ಒಂದು ಹಕ್ಕಿ ಇನ್ನೊಂದು ಹಕ್ಕಿ ಒಟ್ಟಿಂಗೆ ಸೇರಿಕೊಂಡು ಜಗಳ ಮಾಡಿದ್ದು ಅಂದ್ರಾಣ ಬೆಳಗ್ಗಾಣ ಸುದ್ದಿ!.
ಸುಮಾರು ಐದು ತಿಂಗಳಿಂದ ಗೂಡು ಕಟ್ಟಿ ಗಟ್ಟಿ ಕೂತಿದ್ದ ಈ ಹಕ್ಕಿಗೊಕ್ಕೆ ಬೇರೆ ಹಕ್ಕಿಗಳ ಕಾಟ ಸಹಿಸುಲೆ ಆಯ್ದಿಲ್ಲೆ ಹೇಳಿ ಕಾಣ್ತು,ಮರಿಗಳೊಟ್ಟಿಂಗೆ ಗೂಡಿಂಗೆ ರಜೆ ಹಾಕಿತ್ತು..ಆಗ ಚೂರು ಬೇಜಾರ ಆತು ಆದ್ರುದೆ ಪುನ: ಬಕ್ಕು ಹೇಳಿ ಕಾಯ್ತಾ ಕೂತದ್ದು ಇದ..ಆ ಪಾಪದ ಹಕ್ಕಿಗೊಕ್ಕುದೇ ಬೇರೆ ಜಾಗ ಖುಷಿ ಆಯ್ದಿಲ್ಲೆಯೋ ಅಥವಾ ಪುನ: ಗೂಡು ಕಟ್ಟುವ ಕೆಲಸ ಬೇಡ ಅನ್ಸಿರೆಕ್ಕು.ಮತ್ತೆ ಬಂದು ಇದೇ ಗೂಡಿನ ಸರಿ ಮಾಡಿ ಒಕ್ಕಲು ಕೂದತ್ತು! ಬೆಚ್ಚಂಗೆ ಕೂಡು ಪಿಳಿಪಿಳಿ ಕಣ್ಣು ಮಾಡುಗಿದ...
ಹೀಂಗಿಪ್ಪ ಹಕ್ಕಿಗಳ ಕತೆಗೊ ಸುಮಾರಿಕ್ಕು..ಇದೆಂತಾ ಮಕ್ಕಳ ಕತೆ ಹೇಳಿಯೂ ಅನ್ಸುಗು.ಆದರೆ ಕೆಲವೊಮ್ಮೆ ನಮ್ಮಲ್ಲಿಪ್ಪ ಮಕ್ಕಳ ಮನಸ್ಸು ಹೇಂಗೆ ಕೆಲ ವಿಷಯಲ್ಲಿ ಎಚ್ಚರ ಅವ್ತು ,ಸ್ಪಂದಿಸುತ್ತು ಹೇಳಿ ಪಟಾಕಿಗೆ ಗೊಂತಾದ್ದು ಇದರಿಂದಲೆ..!ಆನು ಈಗಲೂ ಆ ಮನೆ ಎದುರು ಇಪ್ಪ ಗೂಡಿನ ನೋಡ್ತೆ..ಅದ್ರೆ ಏನು ಮಾಡುದು ?
ಹಕ್ಕಿಗೊ ಈಗ ಇಲ್ಲೆ..ಅದು ಗೂಡುಬಿಟ್ಟು ತುಂಬಾ ಸಮಯ ಆತು..ಅದು ಕಟ್ಟಿದ ಗೂಡು ಮಾತ್ರ ಇನ್ನು ಮನೆ ಬಾಗಿಲೆದುರೆ ಗಾಳಿಗೆ ತೊಟ್ಟಿಲಿನ ಹಾಂಗೆ ತೂಗುತ್ತು..ಅಪ್ಪ ಈಗಲೂ ಕೆಲವರ ಹತ್ರ ಅದರ ಕತೆ ಹೇಳುದು ಇದ್ದು..ಆಚ ಮನೆ ಪುಚ್ಚೆ ಈಗಲೂ ಬತ್ತಾದರೂ ಗೂಡಿಲಿ ಎಂತದು ಇಲ್ಲೆ ಹೇಳಿ ಅದಕ್ಕು ಗೊಂತಯ್ದು..ಹೀಂಗೆ ಸಣ್ಣ ವಿಷಯ ಹೇಳಿ ಅಂದುಕೊಂಬಂತದ್ದುದೆ ಕೆಲವೊಂದರಿ ನಮ್ಮ ಆವರಿಸುತ್ತು..ಒಂದು ರೀತಿಯ ಭಾವಾನಾತ್ಮಕ ಸಂಬಂಧ ಬೆಳೆಸುತ್ತು..ಕಾರಣವೇ ಇಲ್ಲದ್ದೇ..!ಅಲ್ಲದಾ..?
ನಾವು ಮನುಷ್ಯರೂ ಹೀಂಗೆ... ಹಕ್ಕಿದೂ ನಮ್ಮದೂ ಕಥೆ ಬೇರೆ ಅಲ್ಲ...ಎಂತ ಹೇಳ್ತಿ?