ಸೋಮವಾರ, ಜೂನ್ 15, 2009

ಲೊಟ್ಟೆ ಪಟ್ಟಾಂಗ ( ಲೊಟ್ಟೆ = / ಪಟ್ಟಾಂಗ)

ಮಾಣಿಯಂಗೊ ಮನೆಲಿದ್ದರೆ ಹರಟೆ, ಕೋಮಿಡಿ, ತಮಾಷೆ ಎಲ್ಲವೂ ಸಾಮಾನ್ಯ.ವಿಷಯ ಲೊಟ್ಟೆ ಅಲ್ಲದ್ರೂ ತಲೆ ಹರಟೆ ಅಪ್ಪಲಾಗೆನ್ನೆ. ಆದರೂ ನಮ್ಮಲ್ಲಿ ಬಾಲ ಇಲ್ಲದ ಹನುಮಂತಂಗೊಕ್ಕೇನೂ ಕಮ್ಮಿ ಇಲ್ಲೆ. ಸಾಮಾನ್ಯವಾಗಿ ಯಾರದ್ದಾದರೂ ನಮ್ಮವರ ಪೈಕಿ ಮನೆಗೆ ಹೋದಪ್ಪಾಗ ಒಂದು ಪ್ರಶ್ನೆ ಇದ್ದನ್ನೆ, ಅದು ಅವ್ವು ಕೊಡುವ ಬೆಲ್ಲ, ನೀರು, ಪಾನಕಕ್ಕಿಂತಲೂ ಹೆಚ್ಚಿಂಗೆ ಎನ್ನ ಪ್ರತೀ ಸರ್ತಿ ತಲೆ ತಿಂಬದಿದ. ಅದೇ 'ಏನು'? ನೆಂತರ ಮನೆ ಜಾಲಿಂಗೆ ಎತ್ತುವಾಗಲೇ ಏನು? ಏನು? ಹೇಳ್ತ ಒಂದು ಗುಂಪೇ ರೆಡಿ ಆವ್ತು. ಸಣ್ಣ ಮನೆಗೆ ಹೋದರೆ ಹೆಚ್ಚು ಹೇಳಿರೆ ನಾಲ್ಕೈದು ಜನ ಕೇಳುಗಿದ. ಅದೇ ಜಂಬ್ರಕ್ಕೆ ಹೋದರೋ 'ಏನು' ಹೇಳಿ ಕೇಳುಲೆ ಚಿಮಣೆಣ್ಣೆಗೆ ಕ್ಯೂ ನಿಂತ ಹಾಂಗೆ ನಿಂತಿರ್ತವು ;ಊಟ ಆಗಿ ಹೊರಡುವ ಸಮಯದ ವರೆಗೂ.. ಹಳೇ ಅಜ್ಜಿಯಕ್ಕೊ ಆದರೆ ಪ್ರಶ್ನೆಯೊಟ್ಟಿಂಗೆ ಒಂದು ಟೋನೂ ಕಂಪೋಸ್ ಮಾಡಿ ಕೇಳ್ತವಿದ. ಕೆಲವು ಜನಂಗೊ ಸಿಡುಕಿಕೊಂಡೇ ಕೇಳುವವೂ ಇದ್ದವು. ರಾಮಾ...ಮೊರೆ ಪರಂಚುವ ಹೇಳಿ ಕಾಣ್ತು.

ಅದೇ ಇದ ಈ ಚಟ್ ಪಟಾಕಿಗೆ ಈ ವಿಷ್ಯ ಭಾರೀ ತಲೆ ತಿಂತಿದ. ಕುಶಲೋಪರಿ ಹೇಳಿ ಆದರೂ ಮನೆಗೆ ಬಪ್ಪದೇ ತಡ ಹೀಂಗೆ ಕೇಳಿರೆ ; ಎನಗಂತೂ ಎಲ್ಲಿ? ಎಂತ? ಹೇಂಗೆ?...ಹೀಂಗೆಲ್ಲಾ ಉಲ್ಟಾ ಮಾತಾಡೆಕ್ಕು ಹೇಳಿಯೇ ಅಪ್ಪದು. ಮೈಗೆ ಹುಷಾರಿಲ್ಲದ್ರೂದೇ ಒಳ್ಳೇದೇ ಹೇಳುವ ಮಟ್ಟಿಂಗೆ ಆಯಿದು. ವಿಪರ್ಯಾಸ ಹೇಳಿರೆ ಹೆಚ್ಚಿನವಕ್ಕೆ ನಾವೆಂತಗೆ ಹಾಂಗೆ ಕೇಳ್ತೆಯೋ ಹೇಳಿಯೇ ಗೊತ್ತಿರ್ತಿಲ್ಲೆ. ಎಲ್ರೂ ಕೇಳ್ತವು.. ಹಾಂಗಾಗಿ ನಾವೂದೇ ಹೇಳಿ..

ನಮ್ಮ ಮೂಲೆ ಮನೆ ಅಪ್ಪಚ್ಚಿಗೆ ಹೀಂಗೆ..'ಏನು" ಹೇಳಿ ಕೇಳಿರೆ ದೇವರೇ ಗತಿ. 'ಎಂತದಾ ಏನು? ಆನು ಮನೆಗೆ ಬಪ್ಪಲಾಗ ಹೇಳಿಯಾ?' ಹೇಳಿ ಪೆದಂಬು ರಾಗ ಹಾಡುಗು. ಪುಣ್ಯಕ್ಕೆ ಯಾವುದೋ ಪುಣ್ಯಾತ್ಮ ಒಳ್ಳೇದು ಹೇಳುವ ಉತ್ತರ ಕಂಡು ಹಿಡುದ್ದ. ನ್ಯೂಟನ್ನಿನ ಹಾಂಗೆ! ನಮ್ಮ ಹೊಡೇಲಿ ಆದರೆ ಪರವಾಗಿಲ್ಲೆ. ಅತ್ಲಾಗಾಣ ಶಿರಸಿ, ಸಾಗರದ ನಮ್ಮವಕ್ಕೆ ಏನಾರೂ ಹೀಂಗೆ ಕೇಳಿತ್ತೋ, ತಲೆಯ ಒಂದು ಸುತ್ತು ತಿರುಗಿಸಿ ನೋಡಿ ನಮ್ಮನ್ನೇ ಮಿಕಮಿಕ ನೋಡ್ತವು. ಅದೇ ಅವ್ವಾದರೆ ಕೇಳುದೆಂತ ಗೊಂತಿದ್ದಾ? 'ಬಂದ್ರಾ"? ಅಯ್ಯೋ ರಾಮ ...ಬಾರದ್ದೆ ಎಲ್ಲಿಗೆ ಹೋಪದು? ಅದೂದೆ 'ಏನು ' ಹೇಳುವ ಹಾಂಗೆ ..., ಬಂದದ್ದೇ ತಪ್ಪಾತೇನೋ ಹೇಳಿ ಕೇಳುವ ಹಾಂಗೆ..!ಇದಲ್ಲದೆ ಚೂರು ವೆರೈಟಿಯಾಗಿ ಪ್ರಶ್ನೆ ಕೇಳುವವರಾದ್ರೆ ಇನ್ನೂ ಕೋಮಿಡಿಯೇ ಸರಿ. ನಾವು ಹಷುವಾವ್ತು ಹೇಳಿ ಹೋಟೇಲಿಂಗೆ ನುಗ್ಗಿತ್ತು ಹೇಳಿ ಆದರೆ ಅಲೇ ಇಪ್ಪ ನಮ್ಮ ಚತುರಂಗೊ ಕೂತಿದ್ದರೆ ತಿಂಡಿ ತಿಂಬಲೆ ಬಂದದ್ದೋ, ಚಾ ಕುಡಿವಲೆ ಬಂದದ್ದೋ? ಹೇಳೀ ಕೇಳುಗಿದ. ಅಲ್ಲಡ..ಅಷ್ಟಪ್ಪಾಗ 'ಇಲ್ಲೆ, ಮದುವೆಗೆ ಡೋಲು ಬಾರ್ಸುಲೆ ಬಂದದ್ದು' ಹೇಳಿ ತಿರುಗಿಸಿ ಕೇಳುವ ಹೇಳಿ ಕಾಣುದಿದ್ದು. ಹೀಂಗಿಪ್ಪ ಸುಮಾರು ಕಥೆಗೊ ಇದ್ದು..,ಬಿಡಿ...

ಇರ್ಲಿ, ಮೊದಲಾಣ ವಿಷ್ಯಕ್ಕೆ ಬಪ್ಪ . ಈ ಸರಣಿಗೊಕ್ಕೆ ಒಂದು ಸುಲಭ ಉಪಾಯ ಮಾಡಿರೆ ಅಕ್ಕಾ ? ಒಂದು ಬೋರ್ಡಿಲಿ 'ಒಳ್ಳೇದು' ಹೇಳಿ ಬರದು ಕುತ್ತಿಗೆಗೆ ನೇತು ಹಾಕಿಕೊಳ್ಳೆಕ್ಕಷ್ಟೇ !(ಹೀಂಗಿಪ್ಪಾ ಹುಚ್ಚು ಐಡಿಯಂಗೊ ಬತ್ತಾದರೂ ಪಟ್ಟಾಂಗೊಕ್ಕೆ ಇದೆಲ್ಲಾ ಇಲ್ಲದ್ರೆ ಆವ್ತಿಲ್ಲೆ.) ಅದರ ಬದಲಿಂಗೆ ಎಲ್ರೂ ಸೌಖ್ಯವೋ ( ಆಸ್ಪತ್ರೆಲಿ ಅಲ್ಲ), ಬನ್ನಿ, ಸ್ವಾಗತ, ಬರೆಕ್ಕು, ಖುಷಿ ಆತು ಬಂದದ್ದು ಹೇಳಿ ಹೇಳುಲಕ್ಕು. ಆದರೆ ನಮಲ್ಲಿ ಇಂದಿಂಗೂ ಮೆಗಾಹಿಟ್ ಪ್ರಶ್ನೆ ಹೇಳಿದರೆ ಅದು 'ಏನು"ಹೇಳಿಯೇ !